Mahanavami Hampi
Director: Chaluvaraju
Duration: 00:06:34; Aspect Ratio: 1.333:1; Hue: 39.799; Saturation: 0.072; Lightness: 0.512; Volume: 0.191; Cuts per Minute: 3.955; Words per Minute: 50.348

ಇದು ಕಾಲಗಟ್ಟದ ಸ್ಮಶಾನ ಮಡುವಿನ ಪ್ರವೇಶ ಸ್ಥಳ

HAMPI

MAHANAVAMI HAMPI
This is the entry place of Smashanada Maduvu from the Kaalghatta.

HAMPI

HAMPI
MAhanavami HAMPI

ನೀವು ಈಗ ನೋಡುತ ಇರುವ ಪ್ರದೇಶದ ಹೆಸರು ನಡುಗಡ್ಡೆ

ನೀವು ಈಗ ನೋಡುತ ಇರುವ ಪ್ರದೇಶದ ಹೆಸರು ಹಾವಿನ ಹರಿವು,ರಂಗಾಪುರ.

ಇಲ್ಲಿ ನೀವು ನೋಡ್ತಾ ಇರೋದು ಕಾಲಗಟ್ಟದ ಹನುಮಪ್ಪ ಅಥಾವಾ ಕಾಲಗಟ್ಟದ ಹನುಮಂತರಾಯಪ್ಪ ,ಈ ಗುಡಿಯ ಪಕ್ಕದಲ್ಲಿ ಕಾಲಗಟ್ಟದ ಕರಿಯಮ್ಮನ ಗುಡಿ ಇದೆ.
ಈ ಪ್ರದೇಶದ ಕೆಳಗಡೆ ಇರುವ ಜಾಗ ಕಾಳಗಟ್ಟ ,ಮೇಲಗಡೆ ಪ್ರದೇಶವನ್ನು ಮೇಲಗಟ್ಟ ಎಂದು ಕರೆಯುತ್ತಾರೆ.ಒಟ್ಟು ಈ ಪ್ರದೇಶವನ್ನು ಕಾಲಗಟ್ಟ,ಕಾಳಗಟ್ಟ ಅಥಾವಾ ಕಲಾಗಟ್ಟ ಎಂದು ಕರೆಯುತ್ತಾರೆ.
ಇದು ಹಂಪಿಯ ಅತ್ಯಂತ ಪ್ರಾಚೀನ ಕಾಲದ ಜಾಗವಾಗಿದೆ.

ಇವರು ಇರುವಂತ ಈ ಸ್ಥಳ ಅತ್ಯಂತ ಪ್ರಾಚೀನವಾದದ್ದು ವಿಜಯನಗರದ ಪೂರ್ವಕ್ಕೆ ಇರುವ ಈ ಜಾಗ ಒಂದು ಬಹುದೊಡ್ಡ ವಸತಿ ನೆಲೆ.ಇವರೀಗ ತುಂಗಭದ್ರಾ ನದಿಯ ಬಲದಂಡೆ ಮೇಲಿರುವ ಈ ಸ್ಥಳವನ್ನು ಕಾಲಘಟ್ಟ ಎಂದು ಕರೆಯುತ್ತೆವೆ . ಈ ಸ್ಥಳದಲ್ಲಿ ಇರುವ ದೇವರು ಕಾಲಘಟ್ಟದ ದೇವರಮಾಳದ ಹನುಮಪ್ಪ ದೇವರು , ಈ ದೇವರನ್ನು ಕಾಲಘಟ್ಟದ ಹನುಮಪ್ಪ ಎಂದು ಕರೆಯುತ್ತಾರೆ, ಇಲ್ಲಿರುವ ೧೫೦-೨೦೦ ಎಕರೆ ಪ್ರದೇಶವನ್ನು ದೇವರಮಾಳ ಎಂದು ಕರೆಯುತ್ತಾರೆ,ಈಗ ಈ ಜಾಗದಲ್ಲಿ ವ್ಯವಸಾಯವನ್ನು ಪ್ರಾರಂಬಿಸಿದ್ದಾರೆ,ಕಾಲಘಟ್ಟದ ಹನುಮಪ್ಪ ದೇವರನ್ನು ಕೇಂದ್ರಿಕ್ರುತವಾಗಿಟ್ಟುಕೊಂಡೂ ಈ ಸುತ್ತಮುತ್ತಲಿನ ಪ್ರದೇಶವನ್ನು ದೇವರಮಾಳ ಎಂದು ಕರೆಯುತ್ತ್ತಾರೆ.ಪ್ರಾಚೀನ ಕಾಲದಲ್ಲಿ ದೇವರನ್ನು ಪಲ್ಲಕ್ಕಿಯ ಮೇಲೆ ಮಹಾನವಮಿಯ ಸಂಧರ್ಭದಲ್ಲಿ ಹೋತ್ತು ಬಂದು ನದಿಯಲ್ಲಿ ಜಲದಿ ಮಾಡಿಸುತ್ತಿದ್ದರು,ಅನಂತರ ದೇವರುಗಳೆಲ್ಲಾ ಈ ಸ್ಥಳದಲ್ಲಿ ಬೀಡುಬಿಡ್ತಾ ಇದ್ದವು,ಬೀಡುಬೀಡುವ ಈ ಪ್ರದೇಶವನ್ನೇ ದೇವರಮಾಳ ಎಂದು ಕರೆತೀವಿ.ದೇವರಮಾಳದ ಪಕ್ಕದಲ್ಲೆ ಇರುವ ಬೆಟ್ಟದ ಆಚೆಗೆ ಇರುವ ಪ್ರದೇಶವನ್ನು ದೇವರಮಡುಗು ಎಂದು ಕರೆತೀವೆ,ಬಂದಂತಹ ದೇವರುಗಳನ್ನು ಸ್ನಾನ ಮಾಡಿಸಲು ದೇವರಮಡುಗು ಜಾಗಕ್ಕೆ ಹೋಗುತ್ತಾ ಇದ್ದರು , ಈ ನೀರನ್ನು ಯಾವುದೇ ಸ್ವಚತಾ ಕಾರ್ಯಕ್ರಮಕ್ಕೆ ಉಪಯೋಗಿಸುತ್ತಿರಲಿಲ್ಲ ಹಾಗೂ ಈ ನೀರನ್ನು ತುಂಬಾ ಪವಿತ್ರವಾಗಿ ಬಳಸುತ್ತಿದ್ದರು.ಈ ಪ್ರದೇಶ ಈ ದಿನ ಪಶುಪಾಲಕರ, ದನಗಾಹಿಗಳ ಸ್ಥಳವಾಗಿ ಹಾಗೂ ಸಂರಕ್ಷಿಣೆ ಇಲ್ಲದ ಸ್ಥಳವಾಗಿ ಮಾರ್ಪಡುಗೋಂಡಿದೆ.ಇದು ಮಹಾನವಮಿಯ ಸಂಧರ್ಭದಲ್ಲಿ ದಸರೆ ಎಂಬ ಹೆಸರಲ್ಲಿ ಆ ಕಾಲಕ್ಕೆ ಬನ್ನಿಯ ಹಬ್ಬದ ಸಂದರ್ಭದಲ್ಲಿ ಜನಸಾಮನ್ಯರ ದೇವರುಗಳು ಈ ಜಾಗದಲ್ಲಿ ನೆಲೆಯುರುತ್ತಿದ್ದವು.

ಈ ಪ್ರದೇಶ ತುಂಗಾಭದ್ರನದಿಯ ಬಲದಂಡೆ ಮೇಲಿರುವ ಜಾಗವನ್ನು ದೇವರ ಮಡುಗು ಎಂದು ಕರೆತ್ತಿವಿ,ಇದರ ಇನ್ನೊಂದು ಭಾಗವೇ ಕಾಲಘಟ್ಟದ ದೇವರಮಾಳ .ಮಹಾನವಮಿಯ ಸಂದರ್ಭದಲ್ಲಿ ಬಂದಂತಹ ದೇವರುಗಳು ದೇವರಮಾಳದಲ್ಲಿ ಬೀಡುಬಿಡ್ತಾ ಇದ್ದವು. ತಂದಂತಹ ಕುಲದೇವತೆ ಹಾಗೂ ಗ್ರಾಮದೆವತೆಗನ್ನು ಸ್ನಾನ ಮಡಿಸುತ್ತಿದ್ದ ಪ್ರದೇಶವೇ ದೇವರಮಡುಗು.ಇನ್ನೊಂದು ಭಾಗಕ್ಕೆ ಇರುವ ಪ್ರದೇಶ ನಾರಯಣಪೇಟೆ ಅದರ ಎದುರುಗಡೆ ಇರುವ ಪ್ರದೇಶವೇ ಸಾಣಾಪುರದ ಹನುಮಪ್ಪನ ಗುಡ್ಡ ಹಾಗೂ ಈ ಪ್ರದೇಶದಲ್ಲೇ ಕಂಡುಬರುವಂತಹ ಭಾಗವನ್ನು ಹಾವಿನ ಹರಿವು ಎಂದು ಕರೇತಿವಿ.ತುಂಗಾಭದ್ರನದಿಯ ಎಡದಂಡೆ ಮೇಲಿರುವ ಜಾಗಗಳಾದ ಗಂಗಮ್ಮನಮಾಳ,ಸ್ಮಶಾನದ ಮಡುಗು ಅನಂತರದಲ್ಲಿ ಬರುವ ಪ್ರದೇಶವೇ ದೇವರ ಮಡುಗು.ಇದೆ ಈ ದೇವರ ಮಡುವಿನಿಂದ ನದಿಯ ಮುಂದಕ್ಕೆ ಹೋದಂತೆ ಸೀಗುವ ಪ್ರದೇಶಗಳಾದ ಕೋಣನ ಹರಿವು,ಕೊಡ್ಲಿ ಮಡುಗು,ಹನುಮನ ಸೆಳೆವು,ಚಕ್ರತೀರ್ಥ,ಹಾಗೂ ವೀರೂಪಕ್ಷ ತೀರ್ಥ ನದಿಗಳು ಈ ಪ್ರದೇಶಗಳ ಮೂಲಕ ಹರಿಯುತ್ತದೆ.ನೀರು ನಿಲ್ಲುವ ಈ ಪ್ರದೇಶದಲ್ಲಿ ವರ್ಷಪೂರ್ತಿ ನೀರು ಬತ್ತುವುದಿಲ್ಲ,ಆ ಕಾರಣಕ್ಕಾಗಿ ಪಶುಪಾಲಕರು ಈ ಪ್ರದೇಶದಲ್ಲಿ ಬೀಡುಬಿಡ್ತಾ ಇದ್ದರು ಹಾಗೂ ಬಂಡೆ ಮೇಲೆ ಪಶುಗಳ ಚಿತ್ರಗಳನ್ನು ಕಾಣಬುಹುದು ಈ ಬಂಡೆಯನ್ನು ಬಲೆ ಹಾಕುವ ಬಂಡೆ ಎಂದು ಕರೆಯುತ್ತಾರೆ.ಈ ಪ್ರದೇಶವನ್ನು ತುಂಬಾ ಪವಿತ್ರವಾಗಿ ಕಾಣುತ್ತಾರೆ ಅದ್ದರಿಂದ ಈ ಪ್ರದೇಶವನ್ನು ದೇವರ ಮಡುಗು ಎಂದು ಕರೆಯುತ್ತಾರೆ.
Pad.ma requires JavaScript.